Tuesday, November 4, 2008

SSLC Results - A Success Story of Chitradurga District - Article in Prajavani Daily - Shikshana Puravani 20-05-2008

SSLC Results - A Success Story

of Chitradurga District

Article published in
Prajavani Daily - Shikshana Section of 20-05-2008
Bedre Manjunath

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಚಿತ್ರದುರ್ಗ ಜಿಲ್ಲೆಗೆ ಎರಡನೇ ಸ್ಥಾನಪರಿಶ್ರಮಕ್ಕೆ ಸಿಕ್ಕ ಸೂಕ್ತ ಪ್ರತಿಫಲ


ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಾಗ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ನೋಡಿ ಆಶ್ಚರ್ಯಗೊಂಡವರೇ ಹೆಚ್ಚು! ಸದಾ ಬರದ ಬೇಗೆಗೆ ತುತ್ತಾಗುತ್ತಿರುವ, ಹಿಂದೊಮ್ಮೆ ಅತ್ಯಂತ ಕೆಳ ಸ್ಥಾನದಲ್ಲಿದ್ದ, ಚಿತ್ರದುರ್ಗ ಜಿಲ್ಲೆ ಎರಡನೇ ಸ್ಥಾನಕ್ಕೆ ಜಿಗಿದದ್ದು ಈ ಆಶ್ಚರ್ಯಕ್ಕೆ ಕಾರಣ. ಆದರೆ, ಈ ಫಲಿತಾಂಶಕ್ಕೆ ಕಾರಣಗಳೇ ಬೇರೆ. ಇದು ಯಾವುದೇ ಜಿಲ್ಲೆಯೂ ಅನುಕರಿಸಬಹುದಾದ ಅತ್ಯಂತ ವ್ಯವಸ್ಥಿತವಾದ ಕಾರ್ಯ ಯೋಜನೆಯನ್ನು (ಆಕ್ಷನ್ ಪ್ಲಾನ್) ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಪಟ್ಟ ಪರಿಶ್ರಮಕ್ಕೆ ಸಿಕ್ಕ ಸೂಕ್ತ ಪ್ರತಿಫಲ ಎನ್ನಬಹುದು. 2006ರಲ್ಲಿ ಶೇಕಡಾ 79.24 (4ನೇ ಸ್ಥಾನ), 2007ರಲ್ಲಿ ಶೇಕಡಾ 78.61 (10ನೇ ಸ್ಥಾನ), 2008ರಲ್ಲಿ ಶೇಕಡಾ 79.53 (2ನೇ ಸ್ಥಾನ) ಪಡೆದು ಹೆಚ್ಚಿನ ಏರಿಳಿತವಿಲ್ಲದಂತೆ ಒಂದೇ ರೀತಿಯ ಫಲಿತಾಂಶವನ್ನು ಕಾಯ್ದುಕೊಂಡು ಬರುತ್ತಿರುವ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಗಳಿಸಿಕೊಳ್ಳಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ.
ಯಶಸ್ಸಿನ ಸೂತ್ರ ಏನು?


1. ವಿಷಯವಾರು ಶಿಕ್ಷಕರ ಸಂಘಗಳ ಪರಿಶ್ರಮ:

ಕಳೆದ ಏಳೆಂಟು ವರ್ಷಗಳಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯವಾರು ಶಿಕ್ಷಕರ ಸಂಘ (ಟೀಚರ್ಸ್ ಕ್ಲಬ್)ಗಳು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ತಮ್ಮ ತಮ್ಮ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಕೋಠಿಗಳನ್ನು, ಮಾದರಿ ಪ್ರಶ್ನೆಪತ್ರಿಕೆ ಮತ್ತು ಕೈಪಿಡಿಗಳನ್ನು ಪ್ರಕಟಿಸಿ, ವಿಷಯವಾರು ಸರಣಿ ರಸಪ್ರಶ್ನೆ ನಡೆಸಿದ್ದೇ ಅಲ್ಲದೇ ತಾಲ್ಲೂಕಾವಾರು ಶಿಕ್ಷಕರ ಸಂಘಗಳ ಮೂಲಕ ಹೋಬಳಿ ಮಟ್ಟದಲ್ಲಿ ತರಬೇತಿ ಕಾಯರ್ಾಗಾರಗಳನ್ನು ಏರ್ಪಡಿಸಿ, ಮುಖಾ-ಮುಖಿ ಚಚರ್ೆಗಳನ್ನು ನಡೆಸಿ, ವಿದ್ಯಾಥರ್ಿಗಳು ಮತ್ತು ವಿಷಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಪ್ರಶ್ನೆಪತ್ರಿಕೆಯ ನೀಲಿನಕ್ಷೆಯನ್ನು ಪರಿಚಯ ಮಾಡಿಕೊಟ್ಟದ್ದು ವಿದ್ಯಾಥರ್ಿಗಳಲ್ಲಿದ್ದ ಪರೀಕ್ಷಾ ಭಯ ನಿವಾರಿಸಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸಫಲವಾದದ್ದು ಒಂದು ಕಾರಣವಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು, ಶಿಕ್ಷಣಾಧಿಕಾರಿಗಳು ಮತ್ತು ವಿಷಯ ಪರಿವೀಕ್ಷಕರ ವೈಯಕ್ತಿಕ ನಿರೀಕ್ಷಣೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ವಿಷಯವಾರು ಶಿಕ್ಷಕರ ಸಂಘಗಳ ಚಟುವಟಿಕೆಗಳು ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಮತ್ತೊಂದು ಕಾರಣವಾಗಿವೆ. ಬಹುಶಃ ಇತರೆ ಯಾವುದೇ ಜಿಲ್ಲೆಯಲ್ಲಿ ಇಂತಹ ಶಿಕ್ಷಕರ ಕ್ಲಬ್ ಇಲ್ಲ!

2. ಸರಣಿ ಪೂರ್ವ ಸಿದ್ಧತಾ ಪರೀಕ್ಷೆಗಳು:

ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯನ್ನು ಎದುರಿಸಲು ವಿದ್ಯಾಥರ್ಿಗಳನ್ನು ಸಿದ್ಧಗೊಳಿಸಿ, ಅದರಲ್ಲಿ ಅವರು ಗಳಿಸುವ ಅಂಕಗಳನ್ನು ಆಧರಿಸಿ ಅಂತಿಮ ಪರೀಕ್ಷೆಯಲ್ಲಿ ಎಷ್ಟು ಫಲಿತಾಂಶ ಬರುತ್ತದೆ ಎಂದು ಊಹಿಸುವುದು ಸಾಮಾನ್ಯವಾದ ಪರಿಪಾಠ. ನಾಲ್ಕುವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ವರ್ಗವಾಗಿ ಬಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀ ಎನ್.ಪಿ. ದೇಶಪಾಂಡೆಯವರು ಪ್ರಾಯೋಗಿಕವಾಗಿ ಅಳವಡಿಸಿದ ಮೂರು ಜಿಲ್ಲಾಮಟ್ಟದ ಸರಣಿ ಪೂರ್ವಸಿದ್ಧತಾ ಪರೀಕ್ಷೆಗಳು ಮತ್ತು ಒಂದು ರಾಜ್ಯಮಟ್ಟದ ಪರೀಕ್ಷೆ ಎದುರಿಸಿದ ವಿದ್ಯಾಥರ್ಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಈಗಾಗಲೇ ಅವರು ಎದುರಿಸಿದ ಪ್ರಶ್ನೆಗಳೇ ಕಂಡುಬಂದಿದ್ದವು. ಪಠ್ಯಪುಸ್ತಕವನ್ನು ಮತ್ತು ಪ್ರಶ್ನೆಕೋಠಿಯನ್ನು ಸಮಗ್ರವಾಗಿ ಓದಲು ತಿಳಿಸಿ, ಅವುಗಳಿಂದಲೇ ನೀಲನಕ್ಷೆಗನುಗುಣವಾಗಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿ ಒಂದಾದ ಮೇಲೆ ಒಂದರಂತೆ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಸಿ, ತಪ್ಪಾಗಿದ್ದರೆ ತಿದ್ದಿಸಿದ್ದರಿಂದ ಅಂತಿಮ ಪರೀಕ್ಷೆಯನ್ನೂ ಮತ್ತೊಂದು ಸುಲಭವಾದ ಪರೀಕ್ಷೆಯೇನೋ ಎಂಬಂತೆ ಎದುರಿಸಿದ ವಿದ್ಯಾಥರ್ಿಗಳು ಅಂದು ಹೆಚ್ಚು ಫಲಿತಾಂಶ ಪಡೆದು 4ನೇ ಸ್ಥಾನಗಳಿಸಿಕೊಳ್ಳಲು ಕಾರಣರಾಗಿದ್ದರು. ಕೆಳಗಿನ ಸ್ಥಾನದಲ್ಲಿದ್ದ ಚಿತ್ರದುರ್ಗ ಮೊದಲ ಹತ್ತು ಸ್ಥಾನಗಳಲ್ಲಿ ಜಾಗಪಡೆದದ್ದು ಅದೇ ಮೊದಲು. ಆನಂತರ ಬಂದ ಶ್ರೀ ನಾಗೇಂದ್ರಪ್ಪ ಮತ್ತು ಈಗಿನ ಉಪನಿದರ್ೇಶಕರಾದ ಶ್ರೀ ಎಲ್. ರಂಗಪ್ಪ, ಶಿಕ್ಷಣಾಧಿಕಾರಿಗಳಾದ ಶ್ರೀ ಲೋಹಿತೇಶ್ವರ ರೆಡ್ಡಿ ಮತ್ತು ಶ್ರೀ ಎನ್. ಎಂ. ರಮೇಶ್ ಅವರುಗಳು ಅದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದು ಹೆಚ್ಚಿನ ಆಸಕ್ತಿವಹಿಸಿದ್ದರಿಂದ ಜಿಲ್ಲೆಯ ಫಲಿತಾಂಶ ಸ್ಥಿರತೆ ಕಾಯ್ದುಕೊಳ್ಳುವಂತಾಯಿತು.

3. ಆಕಾಶವಾಣಿಯ ಪರೀಕ್ಷಾ ಸಿದ್ಧತೆ - ನೇರ ಫೋನ್-ಇನ್-ಕಾರ್ಯಕ್ರಮಗಳು :

ಒಂದು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಮಾಧ್ಯಮವೂ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದಕ್ಕೆ ಕಳೆದ ಐದು ವರ್ಷಗಳಿಂದ ಚಿತ್ರದುರ್ಗ ಆಕಾಶವಾಣಿ ಕೇಂದ್ರ ನಡೆಸಿಕೊಂಡುಬರುತ್ತಿರುವ ಪರೀಕ್ಷಾ ಸಿದ್ಧತೆ - ನೇರ ಫೋನ್ ಇನ್ ಕಾರ್ಯಕ್ರಮಗಳೇ ಉದಾಹರಣೆ. ಏಪ್ರಿಲ್ ಮೊದಲ ಭಾನುವಾರದಿಂದ ಆರಂಭಿಸಿ ಮಾಚರ್್ ಕೊನೆಯ ಭಾನುವಾರದವರೆಗೆ ಪ್ರತಿವಾರವೂ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳ ಜೊತೆ ನಡೆಸುವ ನೇರ ಸಂವಾದ ಕಾರ್ಯಕ್ರಮ ವಿದ್ಯಾಥರ್ಿಗಳು, ಶಿಕ್ಷಕರು ಮತ್ತು ಪೋಷಕರನ್ನು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಾಗೃತರನ್ನಾಗಿಸಿದೆ. ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳು, ಚಚರ್ೆ, ಅಭಿಪ್ರಾಯ ಸಂಗ್ರಹಣೆ, ಕುಂದುಕೊರತೆಗಳ ವಿಚಾರಣೆಗಳು ಮತ್ತು ಸಮಸ್ಯಾ ಪರಿಹಾರಕ್ಕೆಂದಿರುವ ನೇರ ಸಂವಾದ ಕಾರ್ಯಕ್ರಮಗಳು ಡಿಸೆಂಬರ್ನಿಂದ ಮಾಚರ್್ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಕಾರ್ಯಕ್ರಮಗಳಾಗಿ ಬದಲಾಗುತ್ತವೆ. ಸುತ್ತಮುತ್ತಲ ಸುಮಾರು 11 ತಾಲ್ಲೂಕುಗಳ ವಿದ್ಯಾಥರ್ಿಗಳು ಭಾನುವಾರ ಬೆಳಗ್ಗೆ 9.05 ರಿಂದ 9.35ರವರೆಗೆ ಆಕಾಶವಾಣಿಗೆ ಫೋನ್ ಮಾಡಿ ವಿಷಯತಜ್ಞರೊಂದಿಗೆ ನೇರ ಸಂವಾದ ನಡೆಸಿ ಪ್ರಶ್ನೆ ಪತ್ರಿಕೆಗೆ ಮತ್ತು ಕ್ಲಿಷ್ಟವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಾರೆ. ಈ ಸಂವಾದ ಕಾರ್ಯಕ್ರಮವನ್ನು ಕೇಳಲು ಶಿಕ್ಷಣ ಇಲಾಖೆ ಶಾಲೆಗಳಿಗೆ ಪ್ರತ್ಯೇಕ ರೇಡಿಯೋಗಳನ್ನು ಕೊಳ್ಳುವಂತೆ ಆದೇಶಿಸಿದೆ ಮತ್ತು ಆಯಾ ದಿನಗಳಂದು ಶಾಲೆಯಲ್ಲಿ ಸೇರಿ ಒಟ್ಟಿಗೇ ಕೇಳುವಂತೆ, ಕಾರ್ಯಕ್ರಮದಲ್ಲಿ ಶಾಲೆಯ ಇಲ್ಲವೇ ಶಿಕ್ಷರ ಫೋನ್ ಬಳಸಿ ಮಾತನಾಡಲೂ ಅವಕಾಶ ಮಾಡಿಕೊಟ್ಟಿದೆ. ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳು ಏನಾದರೂ ತೊಂದರೆ ಅನುಭವಿಸಿದ್ದರೆ ಸಹಾಯವಾಣಿ ಮೂಲಕ ನೆರವು ನೀಡಿದೆ. ಫಲಿತಾಂಶ ಬಂದ ಮೇಲೆ ಅತ್ಯಂತ ಹೆಚ್ಚು ಅಂಕಗಳಿಸಿದ ಮಕ್ಕಳೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮುಂದಿನ ತಂಡದ ಮಕ್ಕಳು ಉತ್ತೇಜನಗೊಳ್ಳುವಂತೆ ಆಕಾಶವಾಣಿ ನೋಡಿಕೊಂಡಿದೆ. ಪೋಷಕರ ಪ್ರೋತ್ಸಾಹ ಮತ್ತು ಒತ್ತಾಯದಿಂದ ಮಕ್ಕಳು ರೇಡಿಯೋದ ಮುಂದೆ ಕುಳಿತು ಕೇಳಿದ್ದರ ಪರಿಣಾಮ ಉತ್ತಮ ಫಲಿತಾಂಶವಾಗಿ ಹೊರಹೊಮ್ಮಿದೆ.


4. ಐ.ಎ.ಎಸ್., ಕೆ.ಎ.ಎಸ್. ಪರೀಕ್ಷೆಗಳಲ್ಲಿ ರ್ಯಾಂಕ್ಗಳಿಸಿದವರು ಸ್ಪೂತರ್ಿಯ ಸೆಲೆಯಾದದ್ದು:

ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಐ.ಎ.ಎಸ್., ಕೆ.ಎ.ಎಸ್. ಮೊದಲಾದ ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ ಒಂದಲ್ಲಾ ಒಂದು ರ್ಯಾಂಕ್ಗಳಿಸುತ್ತಲೇ ಇದೆ. ಕೆಲವೊಮ್ಮೆ ನಾಲ್ಕೈದು ಮಂದಿ ಯಶಸ್ಸುಗಳಿಸಿದ್ದೂ ಇದೆ. ಈ ಉನ್ನತ ಪರೀಕ್ಷೆಗಳಲ್ಲಿ ರ್ಯಾಂಕ್ಗಳಿಸಿದವರು ನಮ್ಮ ಗ್ರಾಮೀಣ ಅಭ್ಯಥರ್ಿಗಳೇ ಅಲ್ಲವೇ? ಅವರಿಂದ ಸಾಧ್ಯವಾದದ್ದು ನಮ್ಮಿಂದಲೂ ಏಕೆ ಸಾಧ್ಯವಾಗುವುದಿಲ್ಲ? ನಾವೂ ಮಾಡುತ್ತೇವೆ ನೋಡಿ ಎಂಬ ಆತ್ಮವಿಶ್ವಾಸದಿಂದ ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಆಗಾಗ್ಗೆ ಏರ್ಪಡಿಸುವ ಸಮಾರಂಭಗಳಲ್ಲಿ ಈ ರ್ಯಾಂಕ್ ವಿಜೇತರು ಭಾಗವಹಿಸಿ ಮಕ್ಕಳಲ್ಲಿ ಸ್ಫೂತರ್ಿ ತುಂಬಿದ್ದಾರೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸುವ ನಗರ ಮತ್ತು ಗ್ರಾಮೀಣ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲೆಂದೇ ಕಳೆದ ಆರು ವರ್ಷಗಳಿಂದ ಚಿತ್ರದುರ್ಗದ ಐಶ್ವರ್ಯ ಫೋಟರ್್ ಗ್ರೂಪ್ ಆಫ್ ಹೋಟಲ್ಸ್ ಮತ್ತು ಸಮಾಜ ಸೇವಾ ಸಂಸ್ಥೆ ವಿಶೇಷ ಸಮಾರಂಭವನ್ನು ಜೊತೆಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪಧರ್ೆಗಳನ್ನು ಏರ್ಪಡಿಸುತ್ತಿದ್ದು ಈ ಸಮಾರಂಭದಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳ ರ್ಯಾಂಕ್ ವಿಜೇತರು ಭಾಗವಹಿಸಿ ವಿದ್ಯಾಥರ್ಿಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೆ. ಈ ರೀತಿಯ ಬೆನ್ನುತಟ್ಟುವಿಕೆ ಇದ್ದರೆ ಯಾರು ತಾನೇ ಗೆಲ್ಲುವುದಿಲ್ಲ ಹೇಳಿ?


5. ಶಾಲೆಗಳ ವಿಶೇಷ ಕೋಚಿಂಗ್ ಶಿಬಿರಗಳು:

ನಮ್ಮ ಶಾಲೆಯ ವಿದ್ಯಾಥರ್ಿಗಳು ಅತಿ ಹೆಚ್ಚು ಅಂಕಗಳಿಸಬೇಕು, ನೂರಕ್ಕೆ ನೂರು ಫಲಿತಾಂಶ ಬರಬೇಕು ಎಂದು ಚಿತ್ರದುರ್ಗದ ಬಹುತೇಕ ಎಲ್ಲಾ ಶಾಲೆಗಳ ಮುಖ್ಯಸ್ಥರು ತಾವಾಗಿಯೇ ಎಸ್.ಎಸ್.ಎಲ್.ಸಿ. ತರಗತಿಗಳನ್ನು ಒಂದು ತಿಂಗಳು ಮುಂಚಿತವಾಗಿಯೇ ಆರಂಭಿಸಿ ವಿಶೇಷ ಕೋಚಿಂಗ್ ನೀಡುತ್ತಿದ್ದಾರೆ. ರಜಾ ಕಡಿತ ಎಂದು ಭಾವಿಸಿದರೂ ವಿದ್ಯಾಥರ್ಿಗಳು ಖುಷಿಯಿಂದಲೇ ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಖಾಸಗೀ ಟ್ಯೂಷನ್ ತರಗತಿಗಳೂ ಒಂದು ತಿಂಗಳು ಮುಂಚೆಯೇ ಇಲ್ಲಿ ಆರಂಭವಾಗುತ್ತವೆ. ಮೂರು ನಾಲ್ಕು ವರ್ಷದ ಪ್ರಶ್ನೆಪತ್ರಿಕೆಗಳನ್ನು ಕಡ್ಡಾಯವಾಗಿ ಬಿಡಿಸುವುದು ಮತ್ತು ಮೂರು ಸರಣಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸುವುದು, ಸಂಶಯವಿದ್ದಲ್ಲಿ ನೇರ ಸಂವಾದ ಕಾರ್ಯಕ್ರಮಗಳಲ್ಲಿ ನಿರ್ಭಯವಾಗಿ ಚಚರ್ಿಸುವ ವಿದ್ಯಾಥರ್ಿಗಳು ನಿರೀಕ್ಷೆಯಂತೆ ಹೆಚ್ಚಿನ ಫಲಿತಾಂಶ ಪಡೆದೇ ಪಡೆಯುತ್ತಾರೆ, ಅಲ್ಲವೇ?


6. ಅಕ್ಷರ ದಾಸೋಹದ ಕಟಾಕ್ಷ - ಬಿಸಿ ಊಟದ ಕರಾಮತ್ತು :

ಹೊಟ್ಟೆ ತುಂಬಿದ್ದರೆ ತಾನೇ ತಲೆ ಓಡುವುದು? ಹಸಿದ ಹೊಟ್ಟೆಯಲ್ಲಿ ಪಾಠ ಕೇಳಲಾಗದೇ, ಕೇಳಿದ್ದು ಅರ್ಥವಾಗದೇ ಒದ್ದಾಡುತ್ತಿದ್ದ ಗ್ರಾಮೀಣ ವಿದ್ಯಾಥರ್ಿಗಳು ಅಕ್ಷರ ದಾಸೋಹದ ಬಿಸಿಯೂಟ ಉಂಡು, ನೆಮ್ಮದಿಯಾಗಿ ಪಾಠ ಕೇಳಿ, ಆಸಕ್ತಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ನಿರಾತಂಕವಾಗಿ ಪರೀಕ್ಷೆ ಬರೆದದ್ದು ಫಲಿತಾಂಶದ ಹೆಚ್ಚಳಕ್ಕೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ನಗರ ಪ್ರದೇಶದವರಿಗಿಂತ ಬಿಸಿ ಊಟದ ಮಹತ್ವ ಗ್ರಾಮೀಣರ, ಕೃಷಿ ಕಾಮರ್ಿಕರ ಮಕ್ಕಳಿಗೆ ಬಿಸಿ ಊಟದಿಂದ ಆಗಿರುವ ಪ್ರಯೋಜನಗಳನ್ನು ಅವರಲ್ಲಿಗೇ ಹೋಗಿ ತಿಳಿದುಕೊಳ್ಳಬೇಕು. ಅದರ ಒಂದು ಸ್ಯಾಂಪಲ್ ಈ ಬಾರಿಯ ಹೆಚ್ಚಿನ ಫಲಿತಾಂಶ! ಇದಿಷ್ಟೇ ಅಲ್ಲ, ಬದಲಾಗಿರುವ ಪ್ರಶ್ನೆಪತ್ರಿಕೆ, ವಸ್ತುನಿಷ್ಠ ಮಾದರಿಯ ಉತ್ತರಗಳು, ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರಿಸುವಂತೆ ಮಾಡಿರುವ ವಿನ್ಯಾಸ ತಪ್ಪು ಉತ್ತರಗಳನ್ನು ಕಡಿಮೆ ಮಾಡಿಸಿವೆ. ಹೊಸ ಪೀಳಿಗೆಯ ವಿದ್ಯಾಥರ್ಿಗಳು ಅನುತ್ತೀರ್ಣ ಎಂಬ ಪದವನ್ನೇ ಕೇಳಲು ಇಷ್ಟಪಡುತ್ತಿಲ್ಲ. ತಮ್ಮ ಕೈಲಾದ ಮಟ್ಟಿಗೆ ಹೆಚ್ಚಿನ ಪರಿಶ್ರಮ ಹಾಕುತ್ತಾರೆ. ಎಲ್ಲಿಯೋ ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬಂದರೂ ಸ್ಥಿರ ಫಲಿತಾಂಶದ ಹಿನ್ನೆಲೆಯನ್ನು ನೋಡಿದಾಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಅನ್ನಿಸುತ್ತದೆ. ಇದೇ ಮಾದರಿಯನ್ನು ಬೇರೆ ಜಿಲ್ಲೆಗಳೂ ಅನುಸರಿಬಹುದು. ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಉನ್ನತ ಸ್ಥಾನಗಳಿಸಿಕೊಳ್ಳಬಹುದು. ಶಿಕ್ಷಣ ಇಲಾಖೆಯ ಹೊಸ ಹೊಸ ತರಬೇತಿ ಕಾರ್ಯಕ್ರಮಗಳು ಶಿಕ್ಷಕರನ್ನು ಹುರಿದುಂಬಿಸಿದ್ದು ಮೊದಲ ಸ್ಥಾನಕ್ಕೆ ಪೈಪೋಟಿ ನೀಡುವಂತೆ ವಿದ್ಯಾಥರ್ಿಗಳನ್ನು ಸಿದ್ಧರನ್ನಾಗಿಸಲು ಪ್ರೇರೇಪಿಸಿದೆ. ಇಷ್ಟೆಲ್ಲಾ ಸಿದ್ಧತೆಗಳೊಂದಿಗೆ ಮುಂದುವರೆಯುತ್ತಿರುವ ಚಿತ್ರದುರ್ಗ ಜಿಲ್ಲೆ ಮುಂದಿನ ವರ್ಷ ಮೊದಲ ಸ್ಥಾನ ಪಡೆದುಕೊಳ್ಳಲಿ ಎಂದು ಹಾರೈಸೋಣ.

ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ


No comments: